ನಮ್ಮ ಇತಿಹಾಸ
ನಮ್ಮ ದೇಶದ ಮೊದಲ ಸಹಕಾರ ಸಂಘವು ಕರ್ನಾಟಕ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ, 1905 ರಲ್ಲಿ ನೊಂದಾಯಿಲ್ಪಟ್ಟಿತು. ಶ್ರೀ ಎಸ್. ಎಸ್. ಪಾಟೀಲ ಇವರನ್ನು ನಮ್ಮ ದೇಶದ ಸಹಕಾರ ಚಳುವಳಿಯ ಪ್ರವರ್ತಕರ ಎಂದು ಪರಿಗಣಿಸಲಾಗುತ್ತದೆ. ಅಂದಿನ ಮದ್ರಾಸ್ ಸರಕಾರದ ಆಡಳಿತಕ್ಕೆ ಸೇರಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಸದುದ್ದೇಶದಿಂದ ಕೆಲ ಸಮಾನ ಮನಸ್ಕ ಗೆಳೆಯರು ಸೇರಿ, ಕುಲಶೇಖರ ಧರ್ಮಗುರುಗಳಾದ ವಂ. ಫ್ರಾನ್ಸಿಸ್ ಎಸ್ ಡಿಸೋಜರ ಮಾರ್ಗದರ್ಶನದಲ್ಲಿ, ಶ್ರೀ. ಎಸ್. ಎಕ್ಸ್. ಮೊಂತೇರೊ ಇವರ ನೇತೃತ್ವದಲ್ಲಿ 06.02.1929 ರಲ್ಲಿ “ಸಂತ ಜೋಸೆಫ್ ಉಳಿತಾಯ ಮತ್ತು ಸಾಲ ಸಹಕಾರಿ ಸಂಘ” ಎಂಬ ಸಂಸ್ಥೆ ರಚಿಸಿದರು. ಸುಮಾರು 1981 ರವರೆಗೆ ಬಡಬಗ್ಗರಿಗೆ, ಕೃಷಿಕರಿಗೆ ಸುಲಭಸಾಧ್ಯವಾಗಿ ಸಾಲ ದೊರೆಯುವಂತೆ ಮಾಡಲು, ಜನಸಾಮಾನ್ಯರ ಆರ್ಥಿಕ ಅಡಚಣೆಗಳಿಗೆ ಪರಿಹಾರ ನೀಡಲು ಶ್ರಮಿಸಿದ ಈ ಸಂಘವು ನಂತರ ತಟಸ್ಥವಾಯಿತು. 1991 ರಲ್ಲಿ, ಸಂದೇಶ ಕಲಾ ಸಂಸ್ಥೆಯ (ಈಗ ಬಳ್ಳಾರಿಯ ಬಿಷಪ್) ಆಗಿನ ನಿರ್ದೇಶಕರಾದ ವಂ. ಹೆನ್ರಿ ಡಿಸೋಜಾ, ಕುಲಶೇಕರ ಪ್ಯಾರಿಷ್ ಚರ್ಚ್ ನ ಧರ್ಮ ಗುರುಗಳಾದ ವಂ. ಎಲಿಯಾಸ್ ಡಿಸೋಜಾ ಮತ್ತು ನಿವೃತ್ತ ಸೊಸೈಟೀಸ್ ರಿಜಿಸ್ಟ್ರಾರ್ ಶ್ರೀ ಜೋಸೆಫ್ ಸಿಕ್ವೇರಾ ಅವರ ನೇತೃತ್ವದಲ್ಲಿ ಸಂಸ್ಥೆಯನ್ನು ಪುನರುಜ್ಜೀವನಗೊಳಿಸಲಾಯಿತು. 1991 ರಲ್ಲಿ ಶ್ರೀ. ಪಿ. ಎಂ. ಕ್ಯಾಸ್ತಲಿನೊ ಹಾಗೂ ಆಡಳಿತ ಮಂಡಳಿ “ಪ್ರಗತಿ ಸಹಕಾರಿ ಸಂಘ” ಎಂಬ ಹೆಸರಿನೊಡನೆ ಸಂಸ್ಥೆಯನ್ನು ಮುನ್ನಡೆಸಿದರು. ಸದಸ್ಯತ್ವ ಹೆಚ್ಚಳ, ಪಾಲು ಬಂಡವಾಳ ಜೋಡಣೆ, ಸದಸ್ಯರ ಅಗತ್ಯಗಳಿಗುಣವಾಗಿ ಆರ್ಥಿಕ ಸವಲತ್ತುಗಳನ್ನು ನೀಡುವ ಕೆಲಸ ಮಾಡಲಾಯಿತು. ನಂತರ ಈ ಕೆಳಗೆ ನಮೂದಿಸಿರುವ ಗೌರವಾನ್ವಿತ ಅಧ್ಯಕ್ಶರು ಹಾಗೂ ಆಡಳಿತ ಮಂಡಳಿಯ ನೇತ್ರತ್ವದಲ್ಲಿ ಮತ್ತು ಸದಸ್ಯರ ಸಹಕಾರದಿಂದ ಪ್ರಗತಿ ಹೊಂದಲಾಯಿತು.
ನಾಯಕತ್ವದ ಇತಿಹಾಸ
ಪ್ರಗತಿ ಸಹಕಾರಿ ಸಂಘ ನಿಯಮಿತ
ಎಲ್. ನಂ. ೪೦೦, ಕುಲಶೇಖರ, ಮಂಗಳೂರು
| ಕ್ರ. ಸಂ. | ಅಧಿಕಾರಾವಧಿ | ಹೆಸರು |
|---|---|---|
| 1 | 1991 ರಿಂದ 17-12-1998 | ಶ್ರೀ ಪಿ. ಎಂ. ಕ್ಯಾಸ್ತೆಲಿನೊ |
| 2 | 18-12-1998 ರಿಂದ 14-02-1999 | ಶ್ರೀ ಕಿರಣ್ ಕ್ಯಾಸ್ತೆಲಿನೊ |
| 3 | 06-03-1999 to 31-08-2001 | ಶ್ರೀ ಪಿ. ಎಂ. ಕ್ಯಾಸ್ತೆಲಿನೊ |
| 4 | 26-09-2001 to 31-08-2003 | ಶ್ರೀ ರೊನಾಲ್ಡ್ ಕ್ಯಾಸ್ತೆಲಿನೊ |
| 5 | 01-09-2003 to 01-09-2008 | ಶ್ರೀ ರೊನಾಲ್ಡ್ ಕ್ಯಾಸ್ತೆಲಿನೊ |
| 6 | 02-09-2008 to 02-09-2013 | ಶ್ರೀ ರೊನಾಲ್ಡ್ ಕ್ಯಾಸ್ತೆಲಿನೊ |
| 7 | 03-09-2013 to 03-09-2018 | ಶ್ರೀ ರೊನಾಲ್ಡ್ ಕ್ಯಾಸ್ತೆಲಿನೊ |
| 8 | 04-09-2018 to 27-11-2019 | ಶ್ರೀ ಜೀವನ್ ವಾಸ್ |
| 9 | 30-12-2019 to 18-08-2023 | ಶ್ರೀ ಬೆನೆಟ್ ಡಿಸಿಲ್ವಾ |
| 10 | 26-08-2023 to Present | ಶ್ರೀ ಜೊಸ್ಸಿ ಸಿಕ್ವೇರಾ |